ಹೊಸಕೋಟೆ : ನಗರದಲ್ಲಿ ಪೂರ್ಣಧಾರಾ ಟ್ರಸ್ಟಿನ ವತಿಯಿಂದ ಉರ್ದು ಶಾಲೆಯ ಮುಖ್ಯೋಪಾಧ್ಯಾಯನನಿಯರಾದ ಗೀತಾ ಮೇಡಂ ರವರನ್ನು ಸನ್ಮಾನಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಉಲುಚುಕಮ್ಮೆ ಬ್ರಾಹ್ಮಣ ಸಂಘಕ್ಕೆ ಆಯ್ಕೆಯಾದ ಹೊಸಕೋಟೆಯವರಾದ ವ್ಯೆ.ಜಿ.ಮುರಳಿಧರ್ ಅವರನ್ನು ಟ್ರಸ್ಟಿನ ವತಿಯಿಂದ ಸನ್ಮಾನಿಸಲಾಯಿತು. ವ್ಯೆ.ಜಿ.ಮುರಳಿಧರ್ ರವರು ಮಾತನಾಡಿ ಟ್ರಸ್ಟಿನ ವತಿಯಿಂದ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ. ನಾನು ಕೂಡ ಮುಂದಿನ ಕಾರ್ಯಕ್ರಮಗಳಿಗೆ ತಮ್ಮಿಂದಾಗುವ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಪೂರ್ಣಧಾರಾ ಟ್ರಸ್ಟಿನ ಅಧ್ಯಕ್ಷರಾದ ಪೂರ್ಣಿಮಾ ರವರು ಮಾತನಾಡಿ ಉತ್ತಮ ವಿದ್ಯಾರ್ಥಿಗಳನ್ನು ದೇಶಕ್ಕೆ ನೀಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ಅಂತಹ ಮಹಾಕಾರ್ಯ ಮಾಡುವ ಶಿಕ್ಷಕರನ್ನು ನಮ್ಮ ಟ್ರಸ್ಟ್ ಗುರುತಿಸಿ ಸನ್ಮಾನಿಸಿದೆ. ವಿದ್ಯಾರ್ಥಿಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಮ್ಮ ಟ್ರಸ್ಟ್ ಹಮ್ಮಿಕೊಂಡಿದೆ. ಪುಸ್ತಕ ವಿತರಣೆ, ವೈದ್ಯಕೀಯ ಚಿಕಿತ್ಸೆ, ಪರಿಸರ ಕಾಳಜಿ, ಗಿಡ ನೆಡುವ ಕಾರ್ಯಕ್ರಮ, ಮಕ್ಕಳಿಗೆ ಮಾದಕ ವ್ಯಸನದಿಂದ ಆಗುವ ದುಷ್ಪರಣಾಮಗಳನ್ನು ಹಾಗೂ ಮುಕ್ತವಾಗುವ ಬಗ್ಗೆ, ಸಾಮಾಜಿಕ ಜಾಲತಾಣದ ತೊಂದರೆಗಳ ಬಗ್ಗೆ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ನಮ್ಮ ಟ್ರಸ್ಟ್ ಶ್ರಮಿಸುತ್ತಿದೆ. ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಂಕಟಕೃಷ್ಣ ಶರ್ಮಾ ತಾಲ್ಲೂಕು ಉಲುಚುಕಮ್ಮೆ ಸಮಿತಿ ಅಧ್ಯಕ್ಷರು ವಹಿಸಿಕೊಂಡಿದ್ದರು, ಸುದರ್ಶನ್ ಸಂಚಾಲಕರು ವಿಪ್ರವೇದಿಕೆ, ಸಾಗರ್ ಯುವ ವೇದಿಕೆ ಅಧ್ಯಕ್ಷ, ರಾಘವೇಂದ್ರ ತಾಲ್ಲೂಕು ಉಲಚುಕಮ್ಮೆ ಸಂಚಾಲಕರು, ಲಕ್ಷ್ಮಿಕಾಂತ್ ಸಂಘಟನಾ ಕಾರ್ಯದರ್ಶಿ, ಸುಧೀಂದ್ರ ಮುಜರಾಯಿ ಶಾಖೆ, ರಾಮಮೂರ್ತಿ ವಕೀಲರು, ರಾಮಚಂದ್ರ ಆರ್, ಆರ್ ಕೇಟರರ್ಸ ಇನ್ನೂ ಅನೇಕರು ಭಾಗವಹಿಸಿದ್ದರು. ಟ್ರಸ್ಟಿಗಳಾದ ಪಲ್ಲವಿ ವಿಜಯ್, ನಾಗಲಕ್ಷ್ಮಿ, ಗುರುಪ್ರಸಾದ್, ರವಿ, ಹಾಗೂ ಮಹೇಶ್ ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ಪೂರ್ಣಧಾರಾ ಟ್ರಸ್ಟಿನ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉಲುಚುಕಮ್ಮೆ ಬ್ರಾಹ್ಮಣ ಸಂಘಕ್ಕೆ ಆಯ್ಕೆಯಾದ
ಹೊಸಕೋಟೆಯವರಾದ ವ್ಯೆ.ಜಿ.ಮುರಳಿಧರ್ ಅವರನ್ನು ಟ್ರಸ್ಟಿನ ವತಿಯಿಂದ ಸನ್ಮಾನಿಸಲಾಯಿತು.


